23rd June 2025
ಬಳ್ಳಾರಿ ಜೂನ್ 20: ಬಳ್ಳಾರಿ ಜಿಲ್ಲಾ ಹಾಗೂ ಬಳ್ಳಾರಿ ತಾಲ್ಲೂಕಿನ ಪ್ರಮುಖ ಬೆಳೆಯು ಜೋಳವಾಗಿದ್ದು, ಸದರಿ ಜೋಳವು ಡಿಸೆಂಬರ್ ಅಥವಾ ಜನವರಿಯಲ್ಲಿ ಕಟಾವುಗೊಂಡು ರೈತರು ತಾವುಗಳು ಬೆಳದಿರುವ ಬೆಳೆಗಳನ್ನು ಮನೆಯ ಮುಂದುಗಡೆ ಹಾಕಿಕೊಂಡಿರುತ್ತಾರೆ. ಅದು ಅಲ್ಲದೇ, ಹಿಂಗಾರು ಬೆಳೆ ಪ್ರಾರಂಭಗೊಂಡಲ್ಲಿ ರೈತರು ಬೆಳೆದಿರುವ ಬೆಳೆಯು ಸಂಪೂರ್ಣ ನಷ್ಟ ಉಂಟಾಗುತ್ತದೆ. ಹಾಗೂ ಸದರಿ ಒಂದೇ ಬೆಳೆಯನ್ನು ಬೆಳೆದು ಸಾಕಷ್ಟು ಹಣವನ್ನು ವ್ಯಯ ಮಾಡಿ, ರೈತರು ಸಂಕಷ್ಟದಲ್ಲಿರುತ್ತಾರೆ. ಇಂತಹ ಸ್ಥಿತಿಯಲ್ಲಿ ಇನ್ನೂ ಖರೀದಿ ಕೇಂದ್ರದಲ್ಲಿ ಜೋಳ ಚಿಂತಲ್ ಮಾಡಿ ಮಾಡಿ, ಜೋಳವನ್ನು ಗೋದಾಮಿಗೆ ಸಾಗಿಸಬೇಕೆಂದು ಕನ್ನಡ ನಾಡು ರೈತ ಸಂಘದ ಜಿಲ್ಲಾಧ್ಯಕ್ಷ ಮೆಣಸಿನ ಈಶ್ವರಪ್ಪ ಬತ್ತಾಯಿಸಿದರು.
ಅವರು ಇಂದು ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರವನ್ನು ಸಲ್ಲಿಸಿ ಮಾತನಾಡಿ,
ಇದೇ ತಿಂಗಳ 30ರಂದು ಜೋಳವನ್ನು ತೆಗೆದುಕೊಳ್ಳುವುದನ್ನು ತಡೆಹಿಡಿಯುವುದಾಗಿ ಹೇಳಿರುತ್ತಾರೆ. ಆದುದರಿಂದ ಈ ಆದೇಶವನ್ನು ರದ್ದು ಮಾಡಬೇಕೆಂದು ಮತ್ತು ಅದನ್ನು ಇನ್ನೂ ಒಂದು ತಿಂಗಳ ಕಾಲ ವಿಸ್ತರಿಸಬೇಕೆಂದರು.
ಖರೀದಿ ಕೇಂದ್ರದಲ್ಲಿ ಸುಮಾರು 3796 ರೈತರು ನೋಂದಣಿ ಮಾಡಿರುತ್ತಾರೆ. ಒಟ್ಟು 2,95,428 ಕ್ವಿಂಟಾಲ್ ಜೋಳವನ್ನು ನೋಂದಣಿ ಮಾಡಿರುತ್ತಾರೆ 81,863 ಕ್ವಿಂಟಲ್ ಜೋಳವನ್ನು ತೂಕ ಹಾಕಿರುತ್ತಾರೆ. ಇನ್ನುಳಿದ 2625 ರೈತರುಗಳು ಇನ್ನು 2,13,565 ಕ್ವಿಂಟಾಲ್ ಜೋಳ ಮಾರುಕಟ್ಟೆಗೆ ಬರಲಿದೆ . ಈ ಜೋಳವನ್ನು ಇಂದಿನಿಂದ ಕೇವಲ 10 ದಿನಗಳಲ್ಲಿ ಹೇಗೆ ತೂಕವನ್ನು ಹಾಕಲಾಗುತ್ತದೆ ? ಇದು ಕಷ್ಟಸಾಧ್ಯವಾದುದು. ಆದುದರಿಂದ 01 ತಿಂಗಳವರೆಗೆ ಸಮಯವಕಾಶವನ್ನು ಮಾಡಿ ಕೊಟ್ಟಲ್ಲಿ ರೈತರಿಗೆ ತುಂಬಾ ಅನುಕೂಲ ಮಾಡಿದಂತಾಗುತ್ತದೆ.
ಆದುದರಿಂದ ಆದಷ್ಟು ಬೇಗನೇ ಜೋಳವನ್ನು ತೂಕವನ್ನು ಮಾಡಿ 80 ರಿಂದ 100 ಲಾರಿಗಳಲ್ಲಿ ಲೋಡ್ ಮಾಡಿಸಿ ಆದಷ್ಟು ಬೇಗನೆ ಕಳುಹಿಸಿಕೊಡುವುದರಿಂದ ರೈತರಿಗೆ ಇನ್ನೂ ತುಂಬಾ ಅನುಕೂಲವಾಗುತ್ತದೆಂದು ತಮ್ಮಲ್ಲಿ ಕೇಳಿಕೊಳ್ಳುತ್ತೇವೆ ಎಂದು ಈಶ್ವರಪ್ಪ ತಿಳಿಸಿದರು.
ಈ ಸಂದರ್ಭದಲ್ಲಿ ಕನ್ನಡ ನಾಡು ರೈತ ಸಂಘ ಸಂಸ್ಥಾಪಕ ರಾಜ್ಯಾಧ್ಯಕ್ಷರು ಮೆಣಸಿನಕಾಯಿ ಈಶ್ವರಪ್ಪ, ಪದಾಧಿಕಾರಿಗಳು ಕನ್ನಿ ಶಿವಮೂರ್ತಿ ಜಿ ದೊಡ್ಡ ಬಸವನಗೌಡ ಜೆ ರಾಜಯ್ಯ ಕುಂಟನಹಾಲ್, ಯಾಲ್ಪಿ ಸುರೇಶ್, ವೈ ಮಲ್ಲಿಕಾರ್ಜುನ , ಮೇಟಿ ದಿವಾಕರ್ ಗೌಡ,ಜಿ ಚೆನ್ನಾ ರೆಡ್ಡಿ ಎನ್ ವಿಶ್ವನಾಥ್ ಗೌಡ ದಿವಾಕರ್ ರೆಡ್ಡಿ ಶಿವಪ್ರಸಾದ್ ರೆಡ್ಡಿ ಮತ್ತಿತರರು ಉಪಸ್ಥಿತರಿದ್ದರು.

ಪತ್ರಕರ್ತರಿಗೆ ಅಗೌರವ ತೋರಿದ ಮಾಜಿ ಶಾಸಕ ಡಿ.ಜಿ. ಪಾಟೀಲ ಹೇಳಿಕೆ ಖಂಡಿಸಿ ಬಹಿರಂಗ ಕ್ಷಮೆಗೆ ಆಗ್ರಹ

ಯಲಬುರ್ಗಾ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕರಾದ ಶಿವಶರಣಪ್ಪಗೌಡ್ರ ಪಾಟೀಲ್ ನಿಧನ.